ಅಭಿಪ್ರಾಯ / ಸಲಹೆಗಳು

ಪರಿಷತ್ತಿನ ಬಗ್ಗೆ

        ರಾಷ್ಟ್ರೀಯ ಶಿಕ್ಷಣ ನೀತಿ-೧೯೮೬ ಮತ್ತು ೨೦೦೨ರಲ್ಲಿ ರಾಜ್ಯ ಸರ್ಕಾರದಿಂದ ಸ್ಥಾಪಿಸಲ್ಪಟ್ಟ ವಿಶೇಷ ಕಾರ್ಯಪಡೆಯು, ರಾಜ್ಯಮಟ್ಟದ ಉನ್ನತ ಶಿಕ್ಷಣದ ಯೋಜನೆ ಮತ್ತು ಸಂಯೋಜನೆಯು ಉನ್ನತ ಶಿಕ್ಷಣ ಪರಿಷತ್ ಮೂಲಕ ಮಾಡಲ್ಪಡಬೇಕೆಂದು ಶಿಫಾರಸ್ಸು ಮಾಡಿತು.

        ಸರ್ಕಾರ, ವಿಶ್ವವಿದ್ಯಾನಿಲಯಗಳು, ಶಿಕ್ಷಣ ತಜ್ಞರು ಮತ್ತು ಪರಿಣಿತರ ಕೂಟವಾಗಿ, ಒಂದೆಡೆ ಸರ್ಕಾರ ಮತ್ತು ವಿಶ್ವವಿದ್ಯಾನಿಲಯಗಳ ನಡುವೆ ಹಾಗೂ ಇನ್ನೊಂದೆಡೆ ವಿಶ್ವವಿದ್ಯಾನಿಲಯಗಳು ಮತ್ತು ಸರ್ವೋಚ್ಛ ಮಟ್ಟದ ನಿಯಂತ್ರಕ ಮಂಡಳಿಗಳ ನಡುವೆ ಕಾರ್ಯಸಮರ್ಥ ಅವಕಾಶವನ್ನು ಹೊಂದುವುದರ ಮೂಲಕ ಈ ಕೂಟದ ಅಂಗಗಳ ನಡುವೆ ಒಂದು ಸಮಷ್ಟಿ ಭಾವವನ್ನು ರೂಪಿಸುವ ದೃಷ್ಟಿಯಿಂದ, ಈ ಕೆಳಗಿನ ಉದ್ದೇಶಗಳೊಂದಿಗೆ, ರಾಜ್ಯ ಉನ್ನತ ಶಿಕ್ಷಣ ಪರಿಷತ್ತನ್ನು ಸ್ಥಾಪಿಸಲಾಗಿದೆ.

  • ನೀತಿ ಸೂತ್ರೀಕರಣ ಮತ್ತು ದೃಷ್ಟಿಕೋನ ಯೋಜನೆಗಾಗಿ ಶೈಕ್ಷಣಿಕ ಸಲಹೆಗಳನ್ನು ಪಡೆಯುವ ಮೂಲಕ ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಸಾಮಾಜಿಕ ಸ್ಯಾಯವನ್ನು ಸರ್ಕಾರ ಉತ್ತೇಜಿಸುವುದು;
  • ರಾಜ್ಯದೊಳಗಿನ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳ ಸ್ವಾಯತ್ತತೆ, ಉತ್ತರದಾಯಿತ್ವ ಮತ್ತು ಅನ್ಯೋನ್ಯತೆಯನ್ನು ಖಾತ್ರಿಪಡಿಸುವುದು; ಮತ್ತು
  • ರಾಜ್ಯದ ಸಾಮಾಜಿಕ-ಆರ್ಥಿಕ ಅವಶ್ಯಕತೆಗನುಗುಣವಾಗಿ ಸಾಮರಸ್ಯ ಪೂರ್ಣ ಉನ್ನತ ಶಿಕ್ಷಣದ ಬೆಳವಣಿಗೆಗೆ ಮಾರ್ಗದರ್ಶನ ನೀಡುವುದು.

ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ: ಇಡಿ ೧೯ ಯುಆರ್‌ಸಿ ೨೦೦೭ (ಭಾಗ ೧), ದಿನಾಂಕ: ೧೫-೦೭-೨೦೦೯ ರಂದು ಹೊರಡಿಸಿರುವ ಆದೇಶದಂತೆ ದಿನಾಂಕ: ೧೫-೦೭-೨೦೦೯ ರಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತನ್ನು ಸ್ಥಾಪಿಸಲಾಗಿದೆ.

 

ಇತ್ತೀಚಿನ ನವೀಕರಣ​ : 23-09-2021 12:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080